ಬಿಲ್ಲಿ ಬೌಡೆನ್WVnin,
![]() | ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ.June 2008) ( |
![]() | |
ವೈಯುಕ್ತಿಕ ಮಾಹಿತಿ | |
---|---|
ಪೂರ್ಣ ಹೆಸರು | Brent Fraser Bowden |
ಅಡ್ಡಹೆಸರು | Billy |
Umpiring information | |
Tests umpired | 61 (2000–present) |
ODIs umpired | 143 (1995–present) |
T20Is umpired | 18 (2005–present) |
ವೃತ್ತಿ ಅಂಕಿಅಂಶಗಳು | |
| |
ಮೂಲ: Cricinfo, 4 June 2010 |
ಬ್ರೆಂಟ್ ಫ್ರೇಸರ್ "ಬಿಲ್ಲಿ' ಬೌಡೆನ್ (ಜನನ ಏಪ್ರಿಲ್ ೧೧, ೧೯೬೩) ಮೂಲತಃ ನ್ಯೂಝಿಲೆಂಡ್ ನವರಾದ ಒಬ್ಬ ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಆಗಿದ್ದಾರೆ. ರ್ಯೂಮೆಟಾಯ್ಡ್ ಆರ್ಥ್ರೈಟಿಸ್ ನಿಂದ ಬಳಲಲು ಆರಂಭಿಸುವ ಮುನ್ನ ಅವರು ಒಬ್ಬ ಆಟಗಾರರಾಗಿದ್ದರು, ಬೇನೆ ಬಾಧಿಸತೊಡಗಿದ ನಂತರ ಅವರು ಅಂಪೈರ್ ಕೆಲಸದಲ್ಲಿ ತೊಡಗಿದರು. "ವಿನಾಶಸೂಚಕ ವಕ್ರ ಬೆರಳು" ಒಳಗೊಂಡಂತೆ, ಇವರ ಹಲವಾರು ನಾಟಕೀಯವಾದ ಸೂಚನಾಶೈಲಿಗಳು ಜನರ ಗಮನ ಸೆಳೆದಿವೆ.[೧]
ಪರಿವಿಡಿ
- ೧ ವೃತ್ತಿಜೀವನ
- ೨ ಸೂಚನೆಗಳು
- ೩ ಅಂತರರಾಷ್ಟ್ರೀಯ ಅಂಪೈರಿಂಗ್ ಅಂಕಿ-ಅಂಶಗಳು
- ೪ ಉಲ್ಲೇಖಗಳು
- ೫ ಬಾಹ್ಯ ಕೊಂಡಿಗಳು
ವೃತ್ತಿಜೀವನ[ಬದಲಾಯಿಸಿ]
ಮಾರ್ಚ್ ೧೯೯೫ರಲ್ಲಿ ಬೌಡೆನ್ ತಮ್ಮ ಮೊದಲ ಅಂತರರಾಷ್ಟ್ರೀಯ ಏಕದಿನದ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು; ಅದು ಹ್ಯಾಮಿಲ್ಟನ್ ನಲ್ಲಿ ನಡೆದ ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯವಾಗಿತ್ತು. ಮಾರ್ಚ್ ೨೦೦೦ ದಲ್ಲಿ ಅವರು ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಕ್ರೀಡಾಂಗಣದ ಅಂಪೈರ್ ಆಗಿ ಆಯ್ಕೆಯಾದರು ಮತ್ತು ೨೦೦೨ರಲ್ಲಿ ಅವರನ್ನು ಎಮಿರೇಟ್ಸ್ ನ ಅಂತರರಾಷ್ಟ್ರೀಯ ಅಂಪೈರ್ ಗಳ ಮಂಡಳಿಯಲ್ಲಿ ಸೇರಿಸಿಕೊಳ್ಳಲಾಯಿತು. ಒಂದು ವರ್ಷದ ನಂತರ ಅವರನ್ನು ದಕ್ಷಿಣ ಆಪ್ರಿಕದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಅಂಪೈರ್ ಆಗಲು ಆದೇಶಿಸಲಾಯಿತು ಹಾಗೂ ಆಸ್ಟ್ರೇಲಿಯ ಮತ್ತು ಭಾರತಗಳ ನಡುವಿನ ಅಂತಿಮ ಪಂದ್ಯದಲ್ಲಿ ಅವರನ್ನು ನಾಲ್ಕನೆಯ ಅಂಪೈರ್ ಆಗಿ ಕಾರ್ಯವಹಿಸಲು ನಿಯಮಿಸಲಾಯಿತು. ಕೆಲವೇ ದಿನಗಳಲ್ಲಿ ಅವರಿಗೆ ಐಸಿಸಿ ಅಂಪೈರುಗಳ ಶ್ರೇಷ್ಠ ಮಂಡಳಿಯ ಸದಸ್ಯರಾಗಿ ಮುಂಬಡ್ತಿ ನೀಡಲಾಯಿತು. ಅವರು ಮತ್ತೆ ೨೦೦೭ರವಿಶ್ವಕಪ್ ಅಂತಿಮ ಪಂದ್ಯದಲ್ಲೂ ನಾಲ್ಕನೆಯ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು ಹಾಗೂ ಒಂದು ತಪ್ಪು ನಿರ್ಣಯ ನೀಡಿದುದರ ಪರಿಣಾಮವಾಗಿ ಪಂದ್ಯವು ಕತ್ತಲೆಯಲ್ಲಿ ಕೊನೆಗಾಣುವಂತಾಯಿತು.[೨] ೨೦೦೬ರಲ್ಲಿ ಬ್ರಿಸ್ಬೇನ್ ನಲ್ಲಿ ನಡೆದ ಆಶಸ್ ಟೆಸ್ಟ್ ಪಂದ್ಯದಲ್ಲಿ ಬೌಡೆನ್ ಸ್ಕ್ವೇರ್ ಲೆಗ್ ಅಂಪೈರ್ ಆಗಿ ನಿಂತಿದ್ದಾಗ ಗೆರಾಯಂಟ್ ಜೋನ್ಸ್ ಹೊಡೆದ ಬಿರುಸಿನ ಹೊಡೆತಕ್ಕೆ ಸಿಲುಕಿ ಧರಾಶಾಯಿಯಾದರು. ೧೯೯೫ರಲ್ಲಿ ನ್ಯೂಝಿಲೆಂಡ್ ಮತ್ತು ಶ್ರೀಲಂಕಾಗಳ ವಿರುದ್ಧದ ಏಕದಿವಸದ ಪಂದ್ಯದ ಮೂಲಕ ಓಡಿಐ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಇವರ ವೃತ್ತಿ ಜೀವನದ ನೂರನೆಯ ಓಡಿಐ ಸಹ ಅದೇ ತಂಡಗಳು ಸೆಣಸಿದ ೨೦೦೭ರಲ್ಲಿ ನಡೆದ ಪಂದ್ಯವಾಗಿತ್ತು; ಸೋಜಿಗವೆಂದರೆ ಎರಡೂ ಪಂದ್ಯಗಳು ಹ್ಯಾಮಿಲ್ಟನ್ ನಲ್ಲೇ ನಡೆದಿದ್ದವು. ನೂರು ಓಡಿಐಗಳಲ್ಲಿ ಅಂಪೈರಿಂಗ್ ಮಾಡಿದ ಅತಿ ಕಿರಿಯ ವಯಸ್ಸಿನ ಅಂಪೈರ್ ಎಂಬ ಕೀರ್ತಿಗೆ ಇವರು ಭಾಜನರಾದರು. ಕೆಲವು ದಿನಗಳ ನಂತರ ಸೈಮನ್ ಟಾಫೆಲ್ ಈ ದಾಖಲೆಯನ್ನು ಮುರಿದರು.
ಸೂಚನೆಗಳು[ಬದಲಾಯಿಸಿ]
ಆರ್ಥ್ರೈಟಿಸ್ ಕಾರಣದಿಂದ ಬಿಲ್ಲಿ ಬೌಡೆನ್ ರಿಗೆ ಸಾಂಪ್ರದಾಯಿಕ ರೀತಿ[೩]ಯಾದ ತರ್ಜನಿಯನ್ನು ಮೇಲೆತ್ತಿ ತೋರಿಸುವ 'ಔಟ್' ನೀಡುವ ಸೂಚನೆಯನ್ನು ನೀಡುವುದು ಬಹಳ ನೋವು ಉಂಟುಮಾಡುತ್ತಿತ್ತು, ಆದ್ದರಿಂದ ಅವರು "ವಿನಾಶಕರ ವಕ್ರ ಬೆರಳಿನ" ಸೂಚನೆ ನೀಡುವುದನ್ನು ಆರಂಭಿಸಿದರು. ಇತರ ಸೂಚನೆಗಳ ಮೇಲೆಯೂ ತಮ್ಮದೇ ಆದ 'ವಕ್ರತೆಯ ಛಾಪು' ಮೂಡಿಸಿರುವ ಬೌಡೆನ್ ನಾಲ್ಕು ರನ್ನುಗಳನ್ನು ಸೂಚಿಸಲು "ತುಣುಕುಗಳನ್ನು ಗುಡಿಸುವ" ರೀತಿಯಲ್ಲಿ ತೋಳನ್ನು ಆಡಿಸುವುದು ಹಾಗೂ ಸಿಕ್ಸರ್ ಸೂಚಿಸಲು "ಜೋಡಿ ವಕ್ರ ಬೆರಳುಗಳ ಷಣ್ಮುಖ ನೆಗೆತ"ಗಳನ್ನು ಬಳಸುತ್ತಾರೆ. ಅವರ ಸೂಚನೆಗಳು ಟೆಸ್ಟ್ ಪಂದ್ಯಗಳಲ್ಲಿ ಶಾಂತರೀತಿಯಲ್ಲಿ, ಓಡಿಐಗಳಲ್ಲಿ ಹೆಚ್ಚು ಆಕರ್ಷಕ ಮತ್ತು ಟ್ವೆಂಟಿ-೨೦ ಗಳಲ್ಲಿ ನಿಜಕ್ಕೂ ಅಲಂಕಾರಿಕವಾಗಿರುತ್ತವೆ. ಅವರ ನಡವಳಿಕೆಯು ಅಭಿಮಾನಿಗಳನ್ನೂ, ಟೀಕಾಕಾರರನ್ನೂ ಆಕರ್ಷಿಸಿದೆ. ಮಾರ್ಟಿನ್ ಕ್ರೋವ್ ಅವರನ್ನು ಬೋಝೋ ದ ಕ್ಲೌನ್ [೩]ಎಂದು ಕರೆಯುತ್ತಾರೆ ಹಾಗೂ ಕನಿಷ್ಠ ಒಬ್ಬ ವೀಕ್ಷಕವಿವರಣಕಾರನಾದರೂ ಕ್ರಿಕೆಟ್ ಇರುವುದು ಆಟಗಾರರಿಗೇ ಹೊರತು ಅಂಪೈರ್ ಗಳಿಗಲ್ಲ ಎಂಬುದನ್ನು ಬೌಡೆನ್ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಟೀಕಿಸಿದ್ದಾನೆ.[೪] ಆದಾಗ್ಯೂ ಅವರ ಆರ್ಥ್ರೈಟಿಸ್ ನ ಕಾರಣದಿಂದ ಅವರು ಶರೀರವನ್ನು ಚಲನೆಯಲ್ಲಿ ತೊಡಗಿಸಿಕೊಂಡಿರಲೇಬೇಕಾದುದರಿಂದ ಅವರು ಮಾಡುವ ರೀತಿಯಲ್ಲೇ ಸೂಚನೆಗಳನ್ನು ಮಾಡುವುದು/ನೀಡುವುದು ಅಗತ್ಯ ಎಂದು ಕೆಲವರ ಅಭಿಪ್ರಾಯವಿದೆ.[೩]
ಬೌಡೆನ್ ಐಸಿಸಿ ಶ್ರೇಷ್ಠ ಅಂಪೈರ್ ಗಳ ಮಂಡಳಿಯಲ್ಲಿದ್ದೂ ಪೆಪ್ಸಿ ಟಿವಿ ಜಾಹಿರಾತು - ಟೇಡಿ ಉಂಗಲಿ (ಬಾಗಿದ/ವಕ್ರ ಬೆರಳು) ಜಾಹಿರಾತಿನಲ್ಲಿ ಕಾಣಿಸಿಕೊಂಡ ಮೊದಲ ಅಂಪೈರ್ ಆಗಿದ್ದಾರೆ - ಈ ಜಾಹಿರಾತು ೨೦೧೧ರ ಕ್ರಿಕೆಟ್ ವಿಶ್ವಕಪ್ ವೇಳೆಯಲ್ಲಿ ಬಿತ್ತರವಾಯಿತು.
ಅಂತರರಾಷ್ಟ್ರೀಯ ಅಂಪೈರಿಂಗ್ ಅಂಕಿ-ಅಂಶಗಳು[ಬದಲಾಯಿಸಿ]
4 ಮಾರ್ಚ್ 2011ರವರೆಗೆ:[೫]
ಪ್ರಥಮ | ಇತ್ತೀಚಿನದ್ದು | ಒಟ್ಟು | |
---|---|---|---|
ಟೆಸ್ಟ್‌ಗಳು | ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ, ಆಕ್ ಲೆಂಡ್ ನಲ್ಲಿ, ಮಾರ್ಚ್ ೨೦೦೦ | ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಣ ಪಂದ್ಯ, ಸಿಡ್ನಿಯಲ್ಲಿ, ಜನವರಿ ೨೦೧೧ | ೬೫ |
ಓಡಿಐಗಳು | ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ನಡುವಣ ಪಂದ್ಯ, ಹ್ಯಾಮಿಲ್ಟನ್ ನಲ್ಲಿ, ಮಾರ್ಚ್ ೧೯೯೫ | ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಣ ಪಂದ್ಯ, ಬೆಂಗಳೂರು ನಲ್ಲಿ, ಮಾರ್ಚ್ ೨೦೧೧ | ೧೫೨ |
T20ಗಳು | ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ, ಆಕ್ ಲೆಂಡ್ ನಲ್ಲಿ, ಫೆಬ್ರವರಿ ೨೦೦೫ | ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಆಕ್ ಲೆಂಡ್ ನಲ್ಲಿ, ಡಿಸೆಂಬರ್ ೨೦೧೦ | ೧೯ |
ಪ್ರಶಸ್ತಿಗಳು
ನೂರು ಓಡಿಐಗಳನ್ನು ಪೂರೈಸಿದ್ದಕ್ಕಾಗಿ ಐಸಿಸಿ ಬ್ರಾನ್ಝ್ ಬೇಲ್ಸ್ ಅವಾರ್ಡ್.
ಉಲ್ಲೇಖಗಳು[ಬದಲಾಯಿಸಿ]
- ↑ ಬಿಲ್ಲಿ ಬೌಡೆನ್ ಸೂಚಿಸುವ ಶೈಲಿಗಳ ಚಿತ್ರಗಳು
- ↑ Malcolm Conn (2007-05-02). "Neutral umpires have failed". www.theaustralian.news.com.au The Australian. Retrieved 2008-12-16.
- ↑ ೩.೦ ೩.೧ ೩.೨ "Bowden breaks the mould". news.bbc.co.uk BBC. 2003-08-20. Retrieved 2007-03-22.
- ↑ Malcolm Conn (2007-01-05). "Bumble Bowden should be humble". www.theaustralian.news.com.au The Australian. Retrieved 2008-12-16.
- ↑ http://www.espncricinfo.com/newzealand/content/player/36339.html
ಬಾಹ್ಯ ಕೊಂಡಿಗಳು[ಬದಲಾಯಿಸಿ]
- ಕ್ರಿಕ್ ಇನ್ಫೋ ದಲ್ಲಿ ಬಿಲ್ಲಿ ಬೌಡೆನ್.
- [೧] - ಬೀಜ್ ಬ್ರಿಗೇಡ್ ನ ಪಾಡ್ ಕ್ಯಾಸ್ಟ್ ಜಾಲತಾಣ